ಸೋಮವಾರ, ಜೂನ್ 14, 2010

ಇನ್ಫಾನ್ಟ್ರಿ ರಸ್ತೆಯ ಸಂಚಾರಿ ದೀಪ....

ಇವತ್ತೂ ಮಾಮೂಲಿನಂತೆ ೭-೩೦ಕ್ಕೆ ಕ್ಯಾಬ್ ಹಿಡಿದು ಕಛೇರಿ ಕಡೆ ಹೊರಟಿದ್ದೆ. ಬೆಂಗಳೂರಿನ ರಸ್ತೆಗಳಲ್ಲಿ ಹಾರಾಡುವ ವಾಹನಗಳ ನಡುವೆ ತನ್ನ ಜಾಗ ಮಾಡಿಕೊಂಡು ಕಾಡುಬೀಸನಹಲ್ಲಿಯಲ್ಲಿರುವ ನಮ್ಮ ಕಛೇರಿಯ ಕಡೆ ನಮ್ಮ ಕ್ಯಾಬ್ ಹೊರಟಿತ್ತು. ಹತ್ತಿದಾಗ ಮಾತನಾಡುತ್ತಲೇ ಇದ್ದ ಗಾಡಿಯಲ್ಲಿನ ಮಿಕ್ಕವರು ಅದು ಯಾವಾಗ ತಮ್ಮ ಹಿಂದಿನ ರಾತ್ರಿಯ ಅರ್ಧ ಕನಸುಗಳನ್ನು ಪೂರ್ತಿ ಮಾಡಿಕೊಳ್ಳುವಲ್ಲಿಗೆ ಹೋದರೋ ಗೊತ್ತೇ ಆಗ್ಲಿಲ್ಲ. ಚಾಲಕನ ಜೊತೆ ಒಂದೆರಡು ಮಾತಾಡಿ, ಕಿಟಕಿ ಕಡೆ ಮುಖ ಮಾಡಿಕೊಂಡು ಮತ್ತದೆ ಕಟ್ಟಡಗಳನ್ನ ನೋಡ್ತಾ, ಅಕ್ಕ ಪಕ್ಕದಲ್ಲಿ ಸೋಮವಾರದ ಕೆಲಸದ ಕಲ್ಪನೆ ತರುವ ಸುಕ್ಕುಗಳನ್ನು ತಮ್ಮ ಹಣೆಯ ಮೇಲೆ ಹೊತ್ತು ತಂತಮ್ಮ ಕಾರ್ಯಕ್ಕೆ ಹೊರಟವರನ್ನ ನೋಡ್ತಾ, ವಾರ ಶುರುವಾಗುವ ದಿನವೇ 'ಈ ವಾರ ಬೇಗ ಮುಗಿದರೆ ಸಾಕಪ್ಪ' ಅಂತ ಯೋಚಿಸುವ ಪ್ರಜೆಗಳ ಬಗ್ಗೆ ಯೋಚಿಸುತ್ತ, ಆಗಾಗ FM ನಲ್ಲಿ ಬರುವ ಹಾಡುಗಳನ್ನು ಗುನುಗುತ್ತ ಒಂದು ಗಂಟೆಯ ಪ್ರಯಾಣ ನಡಿದಿತ್ತು.

ಇನ್ಫಾನ್ಟ್ರಿ ರಸ್ತೆಯಲ್ಲಿ ಹಾದು ಹೋಗುತ್ತಾ ಅಲ್ಲೇ ಒಂದು ಸಂಚಾರಿ ದೀಪದ ಕೆಂಪು ದೀಪಕ್ಕೆ ಗೌರವ ನೀಡಲು ನಮ್ಮ ಗಾಡಿ ನಿಂತಿತು. ಮುಂದೆ ದೀಪ ಹಸಿರಾಗುವುದನ್ನೇ ಕಾಯುತ್ತ ಆಕ್ಸಿಲರೇಟರ್ ಹಿಡಿದೆಯಿದ್ದ ದ್ವಿಚಕ್ರಧಾರಿಗಳು ಅದೇ ವೇಗದಲ್ಲೇ ಮನೆಗೆ ವಪಸಾಗ್ತಾರೆನೋ ಅನ್ನೋ ಥರ ಕಾಣಿಸ್ತಿದ್ರು. ನಮ್ಮ ಚಾಲಕ ಯೋಗೇಶ್ ಇವರೆಲ್ಲರ ಮುಂದೆ ಹೋಗೋಕೆ ಪಕ್ಕದಲ್ಲಿನ ಜಾಗಗಳಿಗೆ ಹೊಂಚು ಹಾಕುತ್ತ ನೋಡುತ್ತಿದ್ದರು. ಮುಂದಿನ ಕುರ್ಚಿಯಲ್ಲೇ ಕೂತಿದ್ದ ನನ್ನ ಪಕ್ಕಕ್ಕೆ ಸಣ್ಣಗೆ ಸದ್ದು ಮಾಡುತ್ತಾ ಒಂದು ಆಟೋ ಬಂದು ನಿಂತ್ಕೊಂತು. ಅದರಲ್ಲಿ ಶಾಲೆಗೆ ಹೋಗಲು ತಯಾರಾಗಿ ಕೂತಿದ್ದ ಗುಂಡಗುಂಡಗಿನ ಒಬ್ಬ ಹುಡುಗ ಕಾಣಿಸಿದ. ಇಣುಕಿ ನೋಡಿದಾಗ ಆ ಆಟೋದಲ್ಲಿ ಇನ್ನೂ ಮಕ್ಕಳಿದ್ದರು ಎಲ್ಲ ಒಂದೇ ಶಾಲೆಗೇ ಹೊರಟಿದ್ದವರು. ಆ ಹುಡುಗನನ್ನ ಒಮ್ಮೆ ಮಾತಾಡಿಸುವ ಎಂದು ಅಂದುಕೊತಿರುವಾಗಲೇ ಗಮನ ಅವರ ಮುಖದ ಮೇಲೆ ಹೋಯ್ತು. ಆ ವಯಸಿನಲ್ಲಿ ಇರಬೇಕಾದ ಮುಗ್ದತೆ ಅವರ ಮುಖದಲ್ಲಿ ಕೊಲೆಯಾಗಿತ್ತು. ಅವರ್ಯಾರು ಒಬ್ಬರೊಂದಿಗೆ ಒಬ್ಬರು ಮಾತಾಡುತಿರಲಿಲ್ಲ. ತಂದೆ ತಾಯಿ ಕಾಣುವ ಕನಸಿನ ಮೈದಾನದಲ್ಲಿ ಒಡಲು ನಿಂತವರಂತೆ ಕಾಣಿಸುತ್ತಿದ್ದರು. ತಮ್ಮ ಮಕ್ಕಳನ್ನು ಸಕಲ ಕಲಾ ವಲ್ಲಭಾರನ್ನಗಿಸುವ ಹವಣಿಕೆಯಲ್ಲಿ ಹೆತ್ತವರು ತಮ್ಮ ಮಕ್ಕಳ ಮೇಲೆಯೇ ಒತ್ತಡ ಯಾಕಾದ್ರು ಹೆರ್ತಾರೋ. 'ನಮ್ಮ ಕಾಲದಲ್ಲಿ ನಿಮ್ಮ ಹಾಗಿದ್ದಾಗ ಎಷ್ಟು ಮಜಾ ಮಾಡಿದ್ವಿ ಗೊತ್ತಾ!' ಅಂತ ದೊಡ್ಡವರೆಲ್ಲ ಮಕ್ಕಳಿಗೆ ಹೇಳಿ ಅವರ ಹೊಟ್ಟೆ ಉರಿಸೋ ಪ್ರಯತ್ನ ಮಾಡ್ತಾನೆ ಇರ್ತಾರೆ, ಆದ್ರೆ ತಮ್ಮ ಕಂದಮ್ಮಗಳಿಗೆ ಮಾತ್ರ ಹಾಗೆ ಆಡುವ ಅವಕಾಶ ಕೊಡೋದೆಯಿಲ್ಲ!.

ಈ ಮಕ್ಕಳು ದೊಡ್ಡ ಸಾಧನೆಗಳನ್ನು ಮಾಡುವ ವ್ಯಕ್ತಿಗಳಾಗಬಹುದು ಆದರೆ, ನಮ್ಮನ್ನು ತಂದ ಪ್ರಕೃತಿಯ ಜೊತೆ ಒಂದಾಗುವ ವ್ಯಕ್ತಿತ್ವ ಕಳೆದುಕೊಳ್ಳುತ್ತಾರಲ್ಲ ಎಂದು ಯೋಚಿಸುತ್ತಿರುವಾಗಲೇ ಅಲ್ಲೇ ಮುಂದೆ ನಮ್ಮ ಸರ್ಕಾರಿ ಶಾಲೆಯಲ್ಲಿ ಓದುವ ೫-೬ ಮಕ್ಕಳು ಕೈ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತಿದ್ದರು. ಅವರಲ್ಲಿ ನಾನು ಹುಡುಕುತಿದ್ದ ಮುಗ್ದತೆ, ಆ ಹುಡುಗಾಟ ತಮ್ಮದೇ ಲೋಕದ ಪರಿಧಿಯಲ್ಲಿ ಅಲೆಯುತ್ತಿರವ ಪುಟ್ಟ ಮನಸ್ಸುಗಳು ಎಲ್ಲವೂ ಬದುಕಿರುವುದು ಕಾಣಿಸಿತು. ನಾನು ಶಾಲೆಗೆ ಹೋಗುವಾಗ ಬುಗುರಿ, ಗೋಲಿ ಆಡುತ್ತ ಹೋಗುತ್ತಿದ್ದದ್ದು, ದಾರಿಯಲ್ಲಿ ಹೋಗುವ ಎತ್ತಿನ ಗಾಡಿಯನ್ನು ಓಡಿ ಹತ್ತಿ ಶಾಲೆ ತನಕ ಬಿಟ್ಟಿ ಸವಾರಿ ಮಾಡುತಿದ್ದ ನೆನಪುಗಳು ಹಾಗೆ ಗಾಜಿನ ಪರದೆಯ ಮೇಲೆ ನೆಡೆದು ಹೋಯಿತು. ಶಾಲೆಯಲ್ಲಿನ ಬಿಸಯೂಟ ತಿನ್ನುವ ಆ ಮಕ್ಕಳಿಗೂ ಅಮ್ಮ ಕಟ್ಟಿಕೊಟ್ಟ ಬ್ರೆಡ್ಡು ಜಾಮು ಹೊತ್ತುಕೊಂಡು ಆಟೋ/ಬಸ್ ನಲ್ಲಿ ಹೋಗುವ ಆ ಮಕ್ಕಳಿಗೂ ಇರೋದು ಒಂದೇ ವೆತ್ಯಾಸ ಅದೇನಂದ್ರೆ ಜೀವನದ ಕ್ಷಣಗಳನ್ನ ಅವರು ಆಸ್ವಾದಿಸೋ ರೀತಿ ಅಷ್ಟೇ. ಇಬ್ಬರೂ ಮುಂದೆ ದೇಶಕ್ಕೆ (ಅಥವಾ ವಿದೇಶಕ್ಕೆ) ಸಹಾಯವಾಗಿ ನಿಲ್ಲುವವರೇ ಆದರೆ ಬೆಳೆಯುವ ರೀತಿ ಮಾತ್ರ ಎಷ್ಟು ಬೇರೆ ಬೇರೆ!. ಹೀಗೆ ಆಲೋಚನೆಗಳು ನನ್ನ ತಲೆಯಲ್ಲಿ ತುಂಬಿ ಕುಣಿಯುತ್ತಿರುವಾಗಲೇ ದೀಪ ಹಸಿರಾಯ್ತು, ಮುಂದಿದ್ದ ದ್ವಿಚಕ್ರಧಾರಿಗಳು ಚಂಗನೆ ನೆಗೆದು ಓಡಿದರು. ನಮ್ಮ ಚಾಲಕ ಯೋಗೇಶ್ ಅವರನ್ನು ಹಿಂದಿಕ್ಕುವ ಯೋಜನೆಯನ್ನು ಜಾರಿ ಗೋಳಿಸಲೆನ್ನುವಂತೆ ಗಾಡಿ ಓಡ್ಸೋಕೆ ಶುರು ಮಾಡಿದ್ರು. ನನಗೆ ಮತ್ತದೆ ಆಲೋಚನೆಗಳು, ಕಟ್ಟಡಗಳು, ಆಕಾಶವಾಣಿಯ ಹಾಡುಗಳು.....

4 ಕಾಮೆಂಟ್‌ಗಳು:

  1. Aa auto dalliruva makkala jeevanadasthe vichitravaagide namma (IT prajegala) jeevana.
    badukalu kaliyabeku.. kaliyona :)

    ಪ್ರತ್ಯುತ್ತರಅಳಿಸಿ
  2. Superb Govardhan.....The way of writing is very impressive and catches the reader, it keeps the reader stick to read till the end of line.

    Hoping to read more....

    ಪ್ರತ್ಯುತ್ತರಅಳಿಸಿ
  3. Govardhana,
    Namma cabgaLalli iro janaranna noDi makkLu enu maataDkotaave gotta?
    "ee nann makkLige schoolge hogohaagilla, teacherge homework oppsohaagilla, shoe polish aagirbekilla, uguru cut maaDbekilla, uniform illa, officealli nidde bandru eddirbeku anno rules illa, PT maaDohagilla... ishTella soukarya iddru jagatte talemaele biddiro haage, oLLe barageTTovara tara caballi nidde maaDtaralla ivrige en heLoNa???"

    ಪ್ರತ್ಯುತ್ತರಅಳಿಸಿ