ಮಂಗಳವಾರ, ಜೂನ್ 22, 2010
ಪ್ರಳಯ!!
ನಾಳೆಯೇ ಆಗುವ ಪ್ರಳಯ ಹೇಗಿರುತ್ತದೆಂದು ಮುಂಚೆಯೇ ತಿಳಿಯುವ ಕುತೂಹಲದಿಂದ ಕಛೇರಿಯಿಂದ ಬರುವಾಗ, ಅವನು '2012' ಚಿತ್ರವನ್ನು ನೋಡಲು ಹೋದ. ಆ ಭಯಾನಕ ಪರಿಸ್ಥಿತಿಯನ್ನು ಎದುರಿಸಲಾರದೆ ಮನೆಗೆ ಬಂದವನೇ ಮಾತ್ರೆ ನುಂಗಿ ಹೊದ್ದು ಮಲಗಿಬಿಟ್ಟ. ಗಾಢ ನಿದ್ರೆಯಲ್ಲಿದ್ದವನ ಜಂಗಮ ಗಂಟೆ (ಮೊಬೈಲ್) ಹೊಡೆದುಕೊಂಡಿತು. 'ಎರಡು ದಿನವಾದರೂ ಕಾಣಿಸದೆ ಎಲ್ಲಿ ಹಾಳಾಗಿ ಹೋಗಿದ್ದಿಯೋ?! ಇವತ್ತು ಬರದೆಯಿದ್ರೆ ನಿನ್ನ ಕೆಲಸದಿಂದ ತಗೆದುಬಿಡ್ತೀನಿ' ಅತ್ತ ಕಡೆಯಿಂದ ಬಾಸ್ ಹೊಡೆದುಕೊಂಡಾಗಲೇ ಅವನಿಗೆ ಪ್ರಳಯದ ಅನುಭವವಾಗಿ ಎದ್ದದ್ದು!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ