ನಿನ್ನೆ ಪ್ರತಿವಾರದ ಹಾಗೆ ವಾರಾಂತ್ಯದ ರಜ ಮುಗಿಸ್ಕೊಂಡು ತುಮ್ಕೂರಿಂದ ಬೆಂಗಳೂರು ಕಡೆ ನಾನು ನನ್ನ ಸ್ನೇಹಿತ ಹೊರಟಿದ್ವಿ. ರಾತ್ರಿ ಊಟ ಇಲ್ಲೇ ಮುಗ್ಸೋಣ ಅಂತ, ಕ್ಯಾತಸಂದ್ರದ ಪ್ರಖ್ಯಾತ ಇಡ್ಲಿ ಹೋಟೆಲಲ್ಲಿ ಒಂದು ತಟ್ಟೆ ಇಡ್ಲಿ ಮತ್ತೆ ಮಸಾಲೆ ದೋಸೆ ತಗೊಂಡ್ವಿ. ಸ್ವಲ್ಪ ಹೊತ್ತಾದ ಮೇಲೆ ಅಲ್ಲಿನ ಒಬ್ಬ ಮಾಣಿ, ಮಹಾಂತೇಶ್ ಅಂತ, ಬಂದು ನನ್ನ ಹಾಗೆ ನೋಡ್ತಿದ್ರು. ನಮ್ಮಲ್ಲಿ ರಾಜ್ಯೋತ್ಸವ ಮಾಡಿದ್ದಾಗ ಮಾಡಿಸಿದ್ದ ಟಿ-ಅಂಗಿ ಹಾಕಿದ್ದೆ ಅದರ ಹಿಂದೆ ನಾನೇ ಬರೆದ ಕಿರುಗವನದ ಒಂದು ಸಾಲಿತ್ತು "ನಾಲಿಗೆಗೆ ಮಾತು ಕಳಿಸಿದ ತಾಯ್ನುಡಿಯು ಚಿರ ಕನ್ನಡ" ಅಂತ, ಬಹುಶಃ ಅದನ್ನೇ ನೋಡ್ತಿದ್ದಾರೆ ಅಂದುಕೊಂಡೆ. ಅದು ನಿಜ, ಆ ಮಾಣಿ ಆಮೇಲೆ ಬಂದು ಮಾತಾಡಿಸಿ, 'ನಾನು ಕೂಡ ಕನ್ನಡ ಅಭಿಮಾನಿ. ಎಷ್ಟು ಹೊತ್ತು ಬೇಕಾದರೂ ಮಾತಾಡು ಅಂದ್ರೆ ಆಂಗ್ಲ ಪದ ಬಳಸದೇನೆ ಕನ್ನಡದಲ್ಲೇ ಮಾತಾಡ್ತೀನಿ. ನಂಗು ನಿಮ್ಮ ಥರದ ಅಂಗಿ ತಂದು ಕೊಡಿ' ಅಂತ ಕೇಳಿದ್ರು. ಅವರ ಮಾತು ಕೇಳಿ ತುಂಬಾ ಖುಷಿ ಆಯ್ತು. 'ಅಂಗಿ ಇಲ್ಲ ಯಜಮಾನ್ರೆ ಮುಂದಿನ ಸರಿ ತಂದು ಕೊಡ್ತೀನಿ' ಅಂತ ಹೇಳಿ ನನ್ನ ಹತ್ರ ಇದ್ದ 'ಅಂಗಡಿಯಲ್ಲಿ ಕನ್ನಡ ನುಡಿ' ಪುಸ್ತಕ ಅವ್ರಿಗೆ ಕೊಟ್ಟು ಮಿಕ್ಕ ಮಾಣಿಗಳನ್ನು ಮಾತಾಡಿಸಿ, ಪುಸ್ತಕ ಓದಲು ಹೇಳಿ ಬಂದೆ....
ಇದೆ ತರಹದ ಒಬ್ಬರು ವ್ಯಕ್ತಿ ಬೆಳ್ಳೂರಿನಲ್ಲಿದ್ದಾರೆ, 'ಅವ್ರ ಹೆಸರೇ 'ಕನ್ನಡ ವಿಟ್ಠಲ್' ಅಂತ! ಅವರು ಗಾಡಿಗಳಿಗೆ ಪೆಟ್ರೋಲ್ ಹಾಕಿಸೋವಾಗ ಕೂಡ 'ತೈಲ ತುಂಬಿ' ಅಂತ ಕನ್ನಡನೇ ಬಳಸ್ತಾರೆ', ಅಂತ ನನ್ನ ಸ್ನೇಹಿತ ಒಬ್ಬ ಕರೆ ಮಾಡಿ ಹೇಳಿದ. ಆಗ್ಲೇ ಅವರ ದೂರವಾಣಿ ಸಂಖ್ಯೆ ತಗೊಂಡು ಅವ್ರಿಗೆ ಕರೆ ಮಾಡಿ ಮಾತಾಡಿಸಿದೆ. ಅವರ ಜೊತೆ ಮಾತಾಡಿ ಖುಷಿನೂ ಆಯ್ತು ರೋಮಂಚನನು ಆಯ್ತು ಅವರು ಒಂದೇ ಒಂದು ಆಂಗ್ಲ ಪದ ಕೂಡ ಬಳಸಲಿಲ್ಲ! ಅವರು ಇರೋದು ಬೆಳ್ಳೂರು ಕ್ರಾಸ್, ಅದನ್ನ ಅವರು ಬೆಳ್ಳೂರು ಅಡ್ಡರಸ್ತೆ ಅಂತ ಅಷ್ಟೇ ಸಲೀಸಾಗಿ ಹೇಳ್ತಾರೆ. ಏರ್ಟೆಲ್ ಗೆ ಇವರು ಇಟ್ಟಿರೋ ಹೆಸರು ಗಾಳಿಮಾತು, ಹೀಗೆ ಎಲ್ಲ ಪದಗಳನ್ನು ಕನ್ನಡದಲ್ಲೇ ಸಲೀಸಾಗಿ ಮಾತಾಡ್ತಾರೆ. ಅಷ್ಟೇ ಅಲ್ಲ ರಾಜ್ಯದ ಹೊರಗೆ ಹೋದಾಗಲೂ ಕೂಡ ಕನ್ನಡವನ್ನೇ ಮಾತಾಡ್ತಾರೆ. ಓದಿರೋದು ಆಂಗ್ಲ ಮಾಧ್ಯಮ ಆದರೂ ಅವರ ತಾಯಿ ಹಾಗು ಗುರುಗಳು ಹೇಳಿದ ಮಾತಿನಂತೆ ಕಳೆದ 17 ವರ್ಷದಿಂದ ಕನ್ನಡವನ್ನೇ ಬಳಸ್ತಿದ್ದಾರೆ. ಹಾಗೆ ಕನ್ನಡದ ಹೋರಾಟಕ್ಕೂ ತಯಾರಿರ್ತಾರೆ. ಜೀವನಕ್ಕಾಗಿ ಬೆಳ್ಳೂರು ಅಡ್ಡರಸ್ತೆಯಲ್ಲಿ ಒಂದು ವಾಣಿಜ್ಯ ಸಂಕೀರ್ಣ ಇಟ್ಕೊಂದಿದ್ದರೆ. ತುಮಕೂರು, ಬೆಂಗಳೂರಿನಲ್ಲಿ ಮಾಡುವ ಕೆಲವು ಮಸಾಲೆ ಪದಾರ್ಥಗಳು, ಕುರುಕಲು ತಿಂಡಿಗಳನ್ನ ವರ್ತಕರಿಗೆ ಹಂಚುವ ಕೆಲಸ ಮಾಡ್ತಾರೆ. ಬೆಳ್ಳೂರು ಅಡ್ಡರಸ್ತೆಯ ಬಳಿ ಇರೋ 'ಮಾತೃ ಸಾಗರ್' ನಲ್ಲಿ ಇವು ಸಿಗುತ್ತೆ. ಒಮ್ಮೆ ಆ ದಾರಿಯಲ್ಲಿ ಓಡಾಡುವುದಿದ್ದರೆ ಒಮ್ಮೆ ಮಾತಾಡಿಸಿ ಅವರ ಮಾತು, ತಿಂಡಿ ಎರಡನ್ನು ಸವಿದು ಬನ್ನಿ.
ಇವರ ಬಗ್ಗೆ ಬರೆಯೋಕೆ ಜಾಗೆ ತುಂಬಾ ತುಂಬಾ ಕಮ್ಮಿ ಇದೆ, ಒಮ್ಮೆ ನೀವೇ ಮಾತಾಡಿಸಿ. ಇಂಥವರಿಗೆ ನಾವು ಹೇಳುವ ಮಾತು ಕೂಡ ಎಷ್ಟೋ ಪ್ರೋತ್ಸಾಹ ನೀಡಬಲ್ಲದು.
ವಿಟ್ಠಲ್ - 9620173882
olle kathe maraya, neenu istondu kannada fan anta tileele ilvallappa !!
ಪ್ರತ್ಯುತ್ತರಅಳಿಸಿAnyways keep up the spirit.
maatu kalisida bhaashege ashTu maaDade hodre henge marayre!
ಪ್ರತ್ಯುತ್ತರಅಳಿಸಿHats off to Govardhan alias Rajni :-)
ಪ್ರತ್ಯುತ್ತರಅಳಿಸಿTumba sogasagi bardidiya Rajni alla Govardhana.
ಪ್ರತ್ಯುತ್ತರಅಳಿಸಿVandanegalu ..
Heege barita iru...
ಗೋವರ್ಧನ ಅವರೇ, ನಿಮ್ಮ ಪ್ರಯತ್ನ ಅತ್ಯಂತ ಶ್ಲಾಘನೀಯ. ಕನ್ನಡವನ್ನು ಇನ್ನಷ್ಟು ಜನರಿಗೆ ಪರಿಚಯಿಸಿ, ಮಲಗಿರುವ ಕನ್ನಡಿಗರನ್ನು ಒದ್ದು ಎಬ್ಬಿಸಿ.
ಪ್ರತ್ಯುತ್ತರಅಳಿಸಿKanndada Kampu sadakaala pasarisuva Kannndada maani Manteshugu haagu kannada kulabairava vitalgu hrupruvaka dahanyveaadagalu..
ಪ್ರತ್ಯುತ್ತರಅಳಿಸಿJothege intha uttamavaada lekhana mattu kavanagallnnu sinichisuva kaayikini govardhanage telebaagide
kannda vittalarige namo namaha, jothege avara bagge vishaya thilisidha nimagoo dhanyavadha..
ಪ್ರತ್ಯುತ್ತರಅಳಿಸಿthatte idli, masale jothe nirargalavaagi mathod kanndadha maani. idhu benglurnalli kanasina maathu... tumkurnalle saadhya
Hey Thumba Kushi aaeyetu.
ಪ್ರತ್ಯುತ್ತರಅಳಿಸಿsacchidananda
Thumba danyawadagallu vishaya hanchikondadake.
ಪ್ರತ್ಯುತ್ತರಅಳಿಸಿ@ Ramanath: Ramanatha avare ellaru (kannadavaru mathra) kannadalli matahdidre banglooralli edannu dodaa vishayavenalla :) .
Tumba olleya lekhana...
ಪ್ರತ್ಯುತ್ತರಅಳಿಸಿ